ಕೆಲವೊಂದು ಸಂದರ್ಭಗಳಲ್ಲಿಯಂತೂ ಪರಮಾತ್ಮ ಕೃಷ್ಣನನ್ನೇ ಜನ್ಮ ಜಾಲಾಡಿ ಮಹಾಭಾರತದ ನಿಜವಾದ Hero ನನ್ನ ಕರ್ಣನೇ ಅನ್ನೋರನ್ನೂ ನೀವು ನೋಡಿರ್ತೀರಿ.
ಕರ್ಣಾಜುನರ ಕಾಳಗಾ ಅಂತಾ ಬಂದಾಗಾ, ಹೆಜ್ಜೆ ಹೆಜ್ಜೆಗೂ ಕೃಷ್ಣನನ್ನ ಊರೂಗೋಲಾಗಿಸಿಕೊಂಡಿದ್ದ ಅರ್ಜುನನಿಗಿಂತ ಕರ್ಣನ ಪತಾಕೆ ಹಿಡಿಯುವವರ ಸಂಖ್ಯೆಯೇ ಜಾಸ್ತಿ ಇರುತ್ತದೆ. ಅಲ್ವಾ?
Why!?
What is the reason?
ಹೋಗಿ ಹೋಗಿ,
ಜಗತ್ತೇ ವಿರೋಧಿಸುತ್ತಿದ್ದ
ದುರ್ಯೋಧನನ ಪರವಾಗಿದ್ದ ಈ ಕರ್ಣನಿಗೆ ಯಾಕಿಷ್ಟು ಮರ್ಯಾದೆ?
ಏನ್ ಕಥೆ?
ಈ ದಾನ ಶೂರ ವಿರ ಕರ್ಣನ ಆರಾಧಕರಿಗೇನು ಹುಚ್ಚು ಹಿಡಿದಿದೆಯಾ?
ಆದಿಕವಿ ಪಂಪಾ, ಕುಮಾರವ್ಯಾಸ, ರಣ್ಣನಂಥೋರು ಕೂಡ ಕರ್ಣನಿಗೆ ಜೈಕಾರ ಹಾಕಿದ್ಯಾಕೆ?
Any guesses?
ಕರ್ಣ ಶಕ್ತಿಶಾಲಿ ಆಗಿದ್ದಾ ಅಂತಾನಾ?
ಇಲ್ಲಾ,
ಕರ್ಣ ಸಿಕ್ಕಾಪಟ್ಟೆ ದಾನಾ ಮಾಡ್ತಿದ್ದಾ ಅಂತಾನೋ?
ಅಥವಾ
ಪಾಪಾ ಕುಂತಿಯ ತಾಯಿ ಮಮತೆಯಲ್ಲಿ ಬೆಳೆಯದೆ, ಯಾರೋ ಅಂಬಿಗರ ಬೆಳೆದ ಮಗು ಅಂತಾನಾ?
ಇಲ್ಲಾ,
ಮಹಾ ಶಕ್ತಿಶಾಲಿ ಆಗಿದ್ದಾ ಅನ್ನೋ ಕಾರಣಕ್ಕೋ?
ಅದೆಲ್ಲಾ ಅಲ್ಲಾ,
ಪಾಂಡವರ ಹಿರಿತಲೆ ಅಂತಾನಾ?
ಪರಶುರಾಮರ ಶಾಪಕ್ಕೆ ತುತ್ತಾಗಿ ಸೋತ ಅಂತಾನಾ?
ಏನು?
ಏನು ಆ ಕಾರಣಾ?
ಹೇಳಾಲಾ?
Yes, I will.
I have to,
ನಿಷ್ಠೆ.
ಬದ್ದತೆ.
ಮಾತಿನಂತೆ ನಡೆದಿದ್ದು.
ಇಂಗ್ಲಿಷನಲ್ಲಿ "Commitment" ಅಂತಾರೆ.
See,
ಜಾತಿ, ಕುಲಗಳ ಕಾರಣದಿಂದ ದ್ರೋಣಾಚಾರ್ಯರಿಂದ ತಿರಸ್ಕೃತನಾದ ಕರ್ಣನಿಗೆ ಯಾವಾಗ ದುರ್ಯೋಧನನ ಆತಿಥ್ಯ ಸಿಗುತ್ತದೋ,
ಅಂದೇ
ಕರ್ಣ,
"ಇನ್ನೇನಿದ್ದರು ನನ್ನ ನಿಷ್ಠೆ ಈ ಕೌರವೆಂದ್ರನಿಗೆ" ಎಂದು, ಘೋಷಿಸಿಬಿಟ್ಟಿದ್ದ.
"ಉರಗಪತಾಕನ ಬಿಟ್ಟು ಬಾರೋ,
ನೀನು ಪಾಂಡವರ ದೊಡ್ಡಣ್ಣ ಕಣೋ,
ಈ ಸಾಮ್ರಾಜ್ಯ ನಿಂದೇಲೋ ಬಿಡಬೇಡ ಈ ಅವಕಾಶಾ" ಎಂದಿದ್ದ ಕೃಷ್ಣನಿಗೆ ಬಂದ ದಾರಿ ತೋರಿಸಿದ್ದ ಈ ಕರ್ಣ.
ಹುಟ್ಟಿದಾಗಾ ನೀರಿಗೆಸೆದು,
ಈಗ ಯುದ್ಧದಲ್ಲಿ ಎಲ್ಲಿ ನನ್ನ ಕಂದಮ್ಮಗಳನ್ನು ಹಾಕಿ ತುಳಿದು ಬಿಟ್ಟಾನೋ ಈ ಕರ್ಣ ಎಂಬ ಭಯದಿಂದ ಬಂದಿದ್ದ ಅವ್ವ ಕುಂತಿಗೂ ಮಣಿಯದೆ, ಸುಯೋಧನನ ನಿಷ್ಠೆಯನ್ನು ಎತ್ತಿ ತೋರಿದ್ದ.
ಇದೇ ಕರ್ಣ ತಾ ಮಾಡುತ್ತಿರುವುದು ಅಕ್ಷಮ್ಯ ಅಪರಾಧವೆಂದು ತಿಳಿದಿದ್ದರೂ,
ಕೇವಲ ದುರ್ಯೋಧನನ ಕಾರಣಕ್ಕಾಗಿ,
ಅಭಿಮನ್ಯುವನ್ನು ಹಿಂದಿನಿಂದ ಕೊಂದಿದ್ದ.
Yes,
ದುರ್ಯೋಧನ ಕಾರಣಕ್ಕಾಗಿ.
ಅದೊಂದೆ ಕಾರಣಕ್ಕಾಗಿ.
Hmm.
ಇದನ್ನು ಈಗಾಗಲೇ ಹೇಳಿದಂತೆ,
ನಿಷ್ಠೆ ಅಂತಾರೆ.
ಸಿಕ್ಕ ಸಿಕ್ಕವರ ಕಡೆ ಇದೆಲ್ಲಾ ಸಿಗಲ್ಲ.
It's most precious thing in the world.
Platinum ಗಿಂತಾ ಸ್ವಲ್ಪ ಕಾಸ್ಟ್ಲಿನೇ ಅನ್ನಬಹುದು.
ಅದಕ್ಕೆ ಕರ್ಣನಿಗೆ ಇನ್ನೂ Value ಇದೆ.
Villain ನ ಕಡೆ ಇದ್ರೂ ಕರ್ಣ ಯಾವಾಗಲೂ Hero ನೇ!
That's the power of commitment.
ಇತ್ತೀಚೆಗೆ ದೇಶದ ಬೆಳವಣಿಗೆಗಳನ್ನಾ ನೋಡಿದಾಗಾ,
ಅದರಲ್ಲೂ ಮುಖ್ಯವಾಗಿ ಆಡಳಿತವ್ಯವಸ್ಥೆಯಲ್ಲಿ,
ನೋಡೋಕೆ ದೊಡ್ಡಾಳುಗಳಂತೆ ಕಾಣೋರೆಲ್ಲಾ,
ಜಂಪಿಗ್ ಜಪಾಂಗ್ ಆಟದಲ್ಲಿ ನಿರತರಾಗಿದ್ದು ನೋಡಿ ಕರ್ಣನ ನೆನಪು ಬಂತು.
See,
ಅದು Personal life ಇರಲಿ or public one,
ಒಂದು ನಿರ್ಧಾರ ಅಂತಾ ಬಂದಮೇಲೆ ಅದಕ್ಕೆ stick on ಆಗಿ ಇರಬೇಕು.
ಪದೇ ಪದೇ ತಂಡ ಬದಲಾಯಿಸುತ್ತಿದ್ದರೆ.
ಸಮಾಜದಲ್ಲಿ ಗೌರವವೂ ಇರಲ್ಲ. ನಮ್ಮವರು ಅಂತಾ ಹೇಳಿಕೊಳ್ಳೋಕೆ ಯಾರೂ ಇರಲ್ಲ.
ಇನ್ನು IAS/IPS ನಂತಹ ಅಧಿಕಾರಿಗಳಂತೂ ಸಂವಿಧಾನ ಮತ್ತು ತಮ್ಮ ಕರ್ತವ್ಯಕ್ಕೆ ಯಾವ ಪರಿ ನಿಷ್ಠರಾಗಿರಬೇಕು ಅಂದ್ರೆ Literally like ಬಾಹುಬಲಿಯ ಕಟ್ಟಪ್ಪನಂತೆ.
Try it.
ನೀವು Brand ಆಗಬೇಕು ಅಂದ್ರೆ,
ದುಡ್ಡು,
ಸೌಂದರ್ಯ,
ಪ್ರತಿಷ್ಠೆ ಏನ್ ಬೇಡ
ಈ commitment ಅನ್ನೋ ಒಂದು ಮೌಲ್ಯಾ fallow ಮಾಡಿ ನೋಡಿ.
Brand ಗಳು ಸೃಷ್ಟಿ ಆಗೋದು ಹೀಗೆನೇ
Hope you got it.
Hit 🔥 if u are in!
-
ಪ್ರವೀಣ ಎಂ ಮಗದುಮ್ಮ
